ಉತ್ಪಲಮಾಲಾ: 1 ಸಂಸ್ಕೃತದ ಒಂದು ವರ್ಣವೃತ್ತ. ನಾಲ್ಕು ಪಾದಗಳಲ್ಲಿಯೂ ಒಂದು ಲಕ್ಷಣವಿರುವ ಸಮವೃತ್ತದ ಇಪ್ಪತ್ತಾರು ಬಗೆಗಳಲ್ಲೊಂದಾದ ಕೃತಿ ಎಂಬ ಗುಂಪಿಗೆ ಸೇರಿದೆ. ಇದರ ಒಂದೊಂದು ಪಾದದಲ್ಲಿ ಇಪ್ಪತ್ತು ವರ್ಣಗಳಿರುತ್ತವೆ. ಪಾದಾರಂಭದ ಗುರುವನ್ನು ಎರಡು ಲಘುಗಳಾಗಿ ಒಡೆದರೆ ಚಂಪಕಮಾಲಾವೃತ್ತವಾಗುತ್ತದೆ. ಉತ್ಪಲಮಾಲೆ ಯಪ್ಪುದು ಭರಂನಭಭಂ ರಲಗಂ ನೆಗೞ್ದೆರಲ್ ಎಂಬ ಸೂತ್ರದಂತೆ ಇದರಲ್ಲಿ ಕ್ರಮವಾಗಿ ಭ, ರ, ನ, ಭ, ಭ, ರ, ಗಣಗಳು ಬಂದು ಕೊನೆಯಲ್ಲಿ ಒಂದು ಲಘು ಒಂದು ಗುರು ಬರುತ್ತವೆ. (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಖ್ಯಾತ-ಕರ್ಣಾಟಕಗಳು).
2 ಉತ್ಪಲಕೃತ ಸಂಸ್ಕೃತ ನಿಘಂಟೊಂದರ ಹೆಸರು.	(ಬಿ.ಕೆ.ಎಸ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ